Sunday, August 29, 2021

ವಿದ್ಯುತ್ ಚಾಲಿತ ವಾಹನ ಹೇಗೆ ಕೆಲಸ ಮಾಡುತ್ತವೆ? ಅವುಗಳನ್ನು ಹೇಗೆ ನಡೆಸಲಾಗುತ್ತದೆ [ಇನ್ನಷ್ಟು ತಿಳಿಯಿರಿ]

ನಮಸ್ಕಾರ ಸ್ನೇಹಿತರೆ, ಬನ್ನಿ ದಿನ ವಿದ್ಯುತ್ ಚಾಲಿತ ವಾಹನ  ಹೇಗೆ ಕೆಲಸ ಮಾಡುತ್ತವೆ ಎಂದು ಮತ್ತು ಇದರಲ್ಲಿ ಲಿಥಿಯಂ ಅಯಾನ್ ಕೋಶಗಳಿಗೆ ಯಾಕೆ ಮಹತ್ವ ಕೊಡಲಾಗಿದೆ ಎಂದು ತಿಳಿದುಕೊಳ್ಳೋಣ.

how electric vehicle works, kannada news today, electric vehicle news


ವಿದ್ಯುತ್ ಚಾಲಿತ ವಾಹನಗಳ ಉತ್ಪಾದನಾ ವೆಚ್ಚದ ಶೇಕಡಾ ೩೦ ಭಾಗ ವಿದ್ಯುತ್ ಕೋಶ (Li-ion Battery) ಗಳಿಗೆ ವ್ಯಯವಾಗುತ್ತದೆ. ವಿದ್ಯುತ್ ಕೋಶದ ಮೇಲಿನ ವೆಚ್ಚವು ವಿದ್ಯುತ್ ಚಾಲಿತ ವಾಹನದ ಮಾರಾಟ ಬೆಲೆಯಲ್ಲಿ ಪರಿಣಾಮಕಾರಿಯಾಗಿ ನಿಲ್ಲುವುದು. ವಿದ್ಯುತ್ ಕೋಶದ ಮೇಲಿನ ವೆಚ್ಚ ದುಬಾರಿಯಾದಲ್ಲಿ ವಾಹನದ ಬೆಲೆಯೂ ಹೆಚ್ಚಾಗುವುದು.

ವಿದ್ಯುತ್ ಚಾಲಿತ ವಾಹನಗಳಲ್ಲಿ ಲಿಥಿಯಂ ಅಯಾನ್ ಕೋಶಗಳ ಬಳಕೆಗೆ ಅತಿ ಮುಖ್ಯ ಕಾರಣವೆಂದರೆ ಅವುಗಳ ಹಗುರತನ ಮತ್ತು ಹೆಚ್ಚಿನ ಶಕ್ತಿ ಸಂಗ್ರಹಣಾ ಸಾಮರ್ಥ್ಯ.

lithium ion, kannada news today, electric vehicle news

ಲಿಥಿಯಂ ಅಯಾನ್ ಕೋಶಗಳು ಆಕಾರದಲ್ಲಿ ನಾವೆಲ್ಲರೂ ಸಾಮಾನ್ಯವಾಗಿ ದೂರನಿಯಂತ್ರಕ (ರಿಮೋಟ್ ಕಂಟ್ರೋಲ್) ಗಳಲ್ಲಿ ಬಳಸುವ AA ಬ್ಯಾಟರಿ ಕೋಶಗಳಿಗಿಂತ ತುಸು ದೊಡ್ಡದಾಗಿರುತ್ತದೆ.

battery management system, kannada news today, electric vehicle news
ಇಂತಹ ೪೦೦ ರಿಂದ ೫೦೦ ಕೋಶಗಳನ್ನು ಸಮಾನಾಂತರವಾಗಿ ಒಂದು ಪೇರಿಸಿ ಬೆಸುಗೆ  ಮಾಡಿ ಹೊಂದಿಕೆಯಾಗುವಂತೆ ಕವಚ (Battery Pack) ರಚಿಸಿ ಅಳವಡಿಸಲಾಗುತ್ತದೆ. ಈ ಕೋಶಗಳನ್ನು ನಿಕಲ್ ಪಟ್ಟಿಗಳನ್ನು ಬಳಸಿ ಬೆಸುಗೆ ಮಾಡಲಾಗುತ್ತದೆ, ನಿಕಲ್ ಲೋಹ ಪಟ್ಟಿಗಳು ವಿದ್ಯುತ್ ಕೊಶಗಳನ್ನು ಬೆಸೆಯುವುದಲ್ಲದೆ ಅವುಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಸಹಾಯಕವಾಗುವುದು. ನಿಕಲ್ ಲೋಹ ಧಾತು ಭಾರತ ದೇಶದ ಒರಿಸ್ಸಾ ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಸಿಗುವುದು.

ವಿದ್ಯುತ್ ಚಾಲಿತ ವಾಹನ ಕ್ರಮಿಸುವ ದೂರ ಇಂತಹ ಕವಚದಲ್ಲಿರುವ ವಿದ್ಯುತ್ ಕೋಶಗಳ ಸಂಖ್ಯೆ ಹಾಗು ಅವುಗಳ ಶಕ್ತಿ ಸಂಗ್ರಹಣ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ.

li-ion 13s 48v bms, kannada news today, electric vehicle news

ಬಾರಿ ಪ್ರಮಾಣದಲ್ಲಿ ವಿದ್ಯುತ್ ಕೋಶಗಳನ್ನು ಜೋಡಿಸಿ ಉಪಯೋಗಿಸುವಾಗ ವಿದ್ಯುತ್ ಚಾಲಿತ ವಾಹನದ ಮೋಟಾರಿನ ಸಮೀಪವಿರುವ ಕೋಶಗಳ ಧಾರಣೆ ಬೇಗನೆ ಕಾಲಿಯಾಗಿ, ದೂರದಲ್ಲಿರುವ ಕೋಶದ ಧಾರಣೆ ಹಾಗೆ ಉಳಿಯುವ ಹಾಗೂ ವಿದ್ಯುತ್ ಕೋಶಗಳ ಮರುಪೂರಣ (charging) ಮಾಡುವಾಗ ಕೆಲ ಕೋಶಗಳು ಸಂಪೂರ್ಣವಾಗಿ ಕೆಲವು ಅರೆಬರೆಯಾಗಿ  ಮರುಪೂರಣಗೊಳ್ಳುವ

ಸಾಧ್ಯತೆ ಅಪಾರ ಇದರಿಂದ ಉಂಟಾಗುವ ತಾಂತ್ರಿಕ ಸಮಸ್ಯೆ ನಿವಾರಿಸಲು ವಿದ್ಯುತ್ ಕೋಶ ನಿರ್ವಹಣಾ ತಂತ್ರಜ್ಞಾನ ವ್ಯವಸ್ಥೆ (BMS - ಬ್ಯಾಟರಿ ಮ್ಯಾನೇಜ್ಮೆಂಟ್ ಸಿಸ್ಟಮ್) ಯನ್ನು ಉಪಯೋಗಿಸಲಾಗುತ್ತದೆ.

ವಿದ್ಯುತ್ ಕೋಶ ನಿರ್ವಹಣಾ ತಂತ್ರಜ್ಞಾನ ವ್ಯವಸ್ಥೆಯ ಮುಖ್ಯ ಕಾರ್ಯ ಎಲ್ಲ ವಿದ್ಯುತ್ ಕೋಶಗಳಿಂದ ಸಮವಾಗಿ ವಾಹನ ಚಾಲನೆಗೆ ಬಳಸುವುದು ಹಾಗೂ ಎಲ್ಲಾ ಕೋಶಗಳಿಗೂ ಸಮವಾಗಿ ವಿದ್ಯುತ್ ಮರುಪೂರಣಗೊಳಿಸುವುದು.

ವಿದ್ಯುತ್ ಚಾಲಿತ ಕಾರಿನಲ್ಲಿ ೪೦೦ ರಿಂದ ೫೦೦ ಕೋಶಗಳನ್ನುಒಳಗೊಂಡದ ೧೫ ರಿಂದ ೨೦ ಕವಚಗಳನ್ನು ಸ್ಥಳಾವಕಾಶಕ್ಕನುಗುಣವಾಗಿ ಕಾರಿನ ಚಾಸಿಯಲ್ಲಿ ಹೊಂದಿಕೊಳ್ಳುವಂತೆ   ಅಳವಡಿಸಲಾಗುತ್ತದೆ.

li-on battery, kannada news today, electric vehicle news
ವಿದ್ಯುತ್ ಚಾಲಿತ ಕಾರಿನಲ್ಲಿ ೪೦೦ ರಿಂದ ೫೦೦ ಕೋಶಗಳನ್ನುಒಳಗೊಂಡದ ೧೫ ರಿಂದ ೨೦ ಕವಚಗಳನ್ನು ಸ್ಥಳಾವಕಾಶಕ್ಕನುಗುಣವಾಗಿ ಕಾರಿನ ಚಾಸಿಯಲ್ಲಿ ಹೊಂದಿಕೊಳ್ಳುವಂತೆ   ಅಳವಡಿಸಲಾಗುತ್ತದೆ.

ವಿದ್ಯುತ್ ಚಾಲಿತ ವಾಹನಗಳ ಬಹು ಮುಖ್ಯ ಭಾಗ ಲಿಥಿಯಂ ಹಾಗೂ ನಿಕಲ್ ಧಾತುಗಳು ಇವಿಲ್ಲದೆ ವಿದ್ಯುತ್ ವಾಹನಗಳ ಕಲ್ಪನೆ ಅಸಾಧ್ಯ.

ಲಿಥಿಯಂನ ಪ್ರಮಾಣ ನಮ್ಮ ದೇಶದಲ್ಲಿ ಅತಿ ಕಡಿಮೆ ಇರುವುದರಿಂದ ಇದನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ ಇದರಿಂದ ಉಂಟಾಗುವ ವೆಚ್ಚವನ್ನು ಕಡಿಮೆ ಮಾಡಿ ಸ್ವಾವಲಂಬನೆ ಸಾದಿಸಲು ಭಾರತ ಸರ್ಕಾರವು ಕಾಬಿಲ್ (KABIL) ಎಂಬ ಯೋಗನ್ನು ರೂಪಿಸಿ NALCO (ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ), MECL  (ಮಿನರಲ್ ಎಕ್ಷ್ ಫ್ಲೋರೆಷನ್ ಕಾರ್ಪೋರೇಶನ್ ಲಿಮಿಟೆಡ್) ಹಾಗೂ HCL (ಹಿಂದುಸ್ಥಾನ್ ಕಾಪರ್ ಲಿಮಿಟೆಡ್) ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಒಂದು ಸ್ವತಂತ್ರ ಸಂಸ್ಥೆಯನ್ನು ಹುಟ್ಟು ಹಾಕಿದೆ ಅದುವೇ KhAnij Bidesh india Limited).

KABIL ಸ್ಥಾಪನೆಯ ಉದ್ದೇಶ ವಿದೇಶಗಳಲ್ಲಿರುವ ಖನಿಜ ಭಂಡಾರಗಳನ್ನು ಗುರುತಿಸಿ ಭಾರತ ದೇಶ ಹಿತಾಸಕ್ತಿಗನುಗುಣವಾಗಿ ಬಳಸಿಕೊಳ್ಳಲು ಒಪ್ಪಂದ ಮಾಡಿಕೊಳ್ಳುವುದು.

ಈಗಾಗಲೇ, ಇಂಡೋನೇಷಿಯಾ ದೇಶದ ನಿಕಲ್ ಹಾಗೂ ಉತ್ತರ ಅಮೇರಿಕ, ಬೊಲಿವಿಯಾ ಮತ್ತು ಚಿಲಿ ದೇಶಗಳ ಲಿಥಿಯಂ ನಿಕ್ಷೇಪಗಳ ಬಳಕೆಗೆ  KABIL ಮೂಲಕ ಒಪ್ಪಂದ ಮಾಡಿಕೊಳ್ಳಲಾಗಿದೆ.

ಇದರಿಂದ ಚೀನಾದ ಲಿಥಿಯಂ ಅಯಾನ್ ಕೋಶಗಳ ಮೇಲಿನ ಅವಲಂಬನೆ ಕಡಿಮೆಯಾಗಿ ೨೦೨೫ರಸ್ಟಿಗೆ ಶೂನ್ಯಕ್ಕಿಳಿಯಲಿದೆ.

ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆ ಹಾಗೂ ಲಿಥಿಯಂ ಅಯಾನ್ ಕೋಶಗಳ ಆಂತರಿಕ  ಉತ್ಪಾದನೆಯನ್ನು ಪ್ರೋತ್ಸಾಹಿಸಲು ನೀತಿ ಆಯೋಗವು ಸಕಲ ಸೌಲಭ್ಯ ಹಾಗೂ ತೆರಿಗೆ ರಿಯಾಯಿತಿಗಳನ್ನು ಘೋಷಿಸಿದೆ.

 ಬರಹ: Kishan Iyengar

ಚಿತ್ರ ಕೃಪೆ: ವಿವಿಧ ಅಂತರ್ಜಾಲ ತಾಣಗಳು.

ಆಧಾರ: ವಿವಿಧ ಅಂತರ್ಜಾಲ ಬರಹಗಳು.

ಓದಲು ನಿಮ್ಮ ಮುಂದಿನ ಲೇಖನಗಳನ್ನು ಆರಿಸಿ:

ಚಿತ್ರ ಕ್ರೆಡಿಟ್: canva.com

No comments:

Post a Comment